ಚಂಡೀಗಢ: ಲೋಕಸಭೆ ಚುನಾವಣೆಗೂ (Lok Sabha Election) ಮುನ್ನ ನಾಯಕರ ಪಕ್ಷಾಂತರ ಪರ್ವ ಮುಂದುವರಿದಿದೆ. ಮಂಗಳವಾರವಷ್ಟೇ ಪಂಜಾಬ್ನ ಹಾಲಿ ಕಾಂಗ್ರೆಸ್ ಸಂಸದ (Congress MP) ರನ್ವೀತ್ ಬಿಟ್ಟು (Ranveet Bittu) ಬಿಜೆಪಿ ಸೇರಿದ್ದರು. ಇದೀಗ ಬುಧವಾರ ಆಮ್ ಆದ್ಮಿ ಪಕ್ಷ (Aam Aadmi Party)ಗೆ ದೊಡ್ಡ ಆಘಾತ ಎದುರಾಗಿದೆ. ಹಾಲಿ ಸಂಸದ ಸುಶೀಲ್ ಕುಮಾರ್ ರಿಂಕು (Sushil Kumar Rinku) ಮತ್ತು ಜಲಂಧರ್ (ಪೂರ್ವ) ಶಾಸಕ ಶೀತಲ್ ಅಂಗುರಲ್ (Sheetal Angural) ಕೂಡ ಬಿಜೆಪಿ ಸೇರಿದ್ದಾರೆ. ಅಚ್ಚರಿಯ ವಿಷಯವೆಂದರೆ ಮುಂಬರುವ ಲೋಕಸಭಾ ಚುನಾವಣೆಗೆ ಜಲಂಧರ್‌ನಿಂದ ಮತ್ತೆ ರಿಂಕುಗೆ ಟಿಕೆಟ್ ನೀಡಲಾಗಿತ್ತು, ಆದರೂ ಅವರು ಎಎಪಿಗೆ ಕೈಕೊಟ್ಟು ಬಿಜೆಪಿ ಸೇರಿದ್ದಾರೆ